ಮಧುಮೇಹಿಗಳು ಪಥ್ಯವನ್ನು ಮಾಡಲು ಬಯಸಿದಲ್ಲಿ ಶಾಖಾಹಾರಿ ಆಹಾರವನ್ನು ಸೇವಿಸುವುದು ಸೂಕ್ತವಾದ ಆಯ್ಕೆಯಾಗಿರುತ್ತದೆ. ಏಕೆಂದರೆ ಶಾಖಾಹಾರದ ಪದ್ಧತಿಯಲ್ಲಿ ಹಲವಾರು ಆಹಾರ ಪದಾರ್ಥಗಳು ಮಧುಮೇಹಿಗಳಿಗೆ ಉತ್ತಮವಾಗಿರುತ್ತವೆ. ಇವುಗಳನ್ನು ವೈಙ್ಞಾನಿಕವಾಗಿ ಸಹ ದೃಢೀಕರಿಸಲಾಗಿರುವುದು ವಿಶೇಷ. ಒಂದು ವೇಳೆ ನೀವು ಶಾಖಾಹಾರಿ ಪಥ್ಯವನ್ನು ಆಯ್ಕೆಮಾಡಿಕೊಂಡರು ಹಲವಾರು ತರಕಾರಿಗಳನ್ನು ಮತ್ತು ಹಣ್ಣುಗಳನ್ನು ಒಟ್ಟಿಗೆ ಸೇವಿಸುವುದು ಉತ್ತಮ. ಇವು ಮಧುಮೇಹಿಗಳಿಗೆ ಅಗತ್ಯವಾದ ಆರೋಗ್ಯವನ್ನು ನೀಡುತ್ತವೆ.