ವಾವ್!
ಎಂತಹ ಮೋಡಿ ಮಾಡುವ ದನಿ!!
ಕೇಳುತ್ತಲೇ ಕರಗಿ ಹೋಗಬೇಕೆನಿಸುವ ಮಾಂತ್ರಿಕತೆ..
ಯಾರೀಕೆ?ಎಲ್ಲಿಯವಳು?
ಅವನಾಗಲೇ ಅನ್ವೇಷಣೆ ಆರಂಭಿಸಿಯಾಗಿತ್ತು.
ಸ್ವರದ ಜಾಡು ಹಿಡಿದು ಹೊರಟವನಿಗೆ ಕೊನೆಗೂ ಸಿಕ್ಕಳವಳು..ಸ್ವರ್ಗಕ್ಕೆ ಮೂರೇ ಗೇಣು..!!
ಆದರೇನು ಮಾಡೋಣ?
ಸಿಕ್ಕಿಯೂ ಸಿಗದ ಮರೀಚಿಕೆಯಾಗಿದ್ದಳು.
ಇರುವ ಪರಿಧಿಯ ಒಳಗೇ ಅವಳ ಇರುವಿಕೆಯನ್ನು ಸಂಭ್ರಮಿಸಲಾಗದೇ ಸಂಭ್ರಮಿಸುವ ಧರ್ಮಸಂಕಟ....
ಈಗ ಉಳಿದದ್ದು ಒಂದೇ ಪ್ರಶ್ನೆ-
ಕಾಡಿದ್ದು ಅವಳ ದನಿ,ಅವಳಲ್ಲ..ಆದರೂ ನಾನೇಕೆ ಅವಳ ಹಿಂದೆ??
-ಸಂಗೀತಾ